• +91 821 2425635
  • info@macwmys.org

Maharani's Arts College for women, Mysore
J. L. B Road Mysore 570 005
Undergraduate and Postgraduate Center
Accredited By NAAC 'B' Grade

ಅಂಬೇಡ್ಕರ್ ಙ್ಞಾನ ದರ್ಶನ ಅಭಿಯಾನ'ದ ಅಂಗವಾಗಿ "ಶಿಕ್ಷಣ ಹಾಗೂ ಶೋಷಿತ ಸಮುದಾಯಗಳ ವಿಮೋಚನೆ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಕಾರ್ಯಗಾರ 08-11-2017 ಮತ್ತು 09-11-2017

 

Maharani’s Arts College for Women, Mysore [MACWM] owes its existence to the farsightedness of the Maharani Kempananjammanni, the Queen Consort of the then His Excellency Maharaja Chamarajendra Wodeyar X. Initially, it was started as Maharani’s Girls School, Mysore. The vision of providing education for girls was the brainchild of social workers such as Amble Narasimha Iyengar (Bakshi of the Palace), M. Venkata Krishnaiah [a renowned journalist of Mysore] and Narayana-Shastri, it was the benevolence of Maharani Kempananjammanni which helped in the establishment of an educational institution exclusively for girls. Thus, the school was started with primary and middle sections on 16th March 1881 with 28 girl pupils.

In 1891, the school was taken over by the Government of Mysore and upgraded to High School. In 1902, the school was again upgraded to II Grade College with the name Maharani’s College and affiliated to the University of Madras. Till 1919, the institution had the college, high school, middle and primary sections together. In 1920, the Maharani’s College became a full-fledged institution of higher education, affiliated to the University of Mysore. 

principal


    ಮಹಾರಾಣಿ ಮಹಿಳಾ ಕಲಾ ಕಾಲೇಜಿಗೆ ಸ್ವಾಗತ ಮೈಸೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ನಮ್ಮ ಕಾಲೇಜು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. 1917ರಲ್ಲಿ ಆಗಿನ ಮೈಸೂರು ರಾಜಮನೆತನದಿಂದ ಪ್ರಾರಂಭವಾದ ಕಾಲೇಜು ಇಂದು ಶತಮಾನದ ಹೊಸ್ತಿಲಲ್ಲಿ ನಿಂತಿದೆ. ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಅತಿ ಹೆಚ್ಚಿನ ಐಚ್ಛಿಕಗಳನ್ನು ಹಾಗೂ ಸ್ನಾತಕೋತ್ತರ ಅಧ್ಯಯನ ವಿಷಯಗಳನ್ನು ಒದಗಿಸುತ್ತಿದೆ. ನಮ್ಮಲ್ಲಿ 15 ಐಚ್ಛಿಕ ವಿಷಯಗಳು, 26 ವಿಷಯ ಗುಂಪುಗಳು ಪದವಿ ತರಗತಿಯಲ್ಲಿ ಲಭ್ಯವಿವೆ. ಒಟ್ಟು 08 ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುವು. ಈ ಶೈಕ್ಷಣಿಕ ಸಾಲಿನಿಂದ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೂಡ ಪ್ರಾರಂಭಿಸಲಾಗಿದೆ. ಮಹಾರಾಣಿ ಮಹಿಳಾ ಕಲಾ ಕಾಲೇಜು ಮುಖ್ಯವಾಗಿ ಐದು ಕ್ಷೇತ್ರಗಳ ಬೆಳವಣಿಗೆಗಾಗಿ ಶ್ರಮಿಸುತ್ತಿರುವುದು. ಅವುಗಳೆಂದರೆ : ವಿದ್ಯಾರ್ಥಿನಿಯರ ಸಫಲತೆ (Student’s Success) ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆ (PG Programme & Research) ಪೂರಕ ವ್ಯವಸ್ಥೆಗಳು ಮತ್ತು ಸೇವೆಗಳು (Support System & Services) ಮಾನವ ಸಂಪನ್ಮೂಲಗಳು ಅಭಿವೃದ್ಧಿ (Human Resource Development) ಆಡಳಿತ ಹಾಗೂ ನಿರ್ವಹಣೆ (Administration and Management) ಈ ಐದು ವಲಯಗಳಲ್ಲಿ ಕಾರ್ಯನಿರ್ವಹಣೆ ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಕಾಲೇಜಿನ ಸಿಬ್ಬಂದಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿ, ಸಾಕಾರಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವರು. ಕರ್ನಾಟಕ ಸರ್ಕಾರ ಪ್ರಾರಂಭಿಸಿರುವ ವಿವಿಧ ವಿದ್ಯಾರ್ಥಿ ಸ್ನೇಹಿ ಶೈಕ್ಷಣಿಕ ಕಾರ್ಯಕ್ರಮಗಳು ಕಾಲೇಜಿನಲ್ಲಿ ಜರುಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮತ್ತು ಇತರ ಸಂಸ್ಥೆಗಳು ನೀಡುವಂತಹ ಸ್ಕಾಲರ್‍ಶಿಪ್ ಫ್ರೀಶಿಪ್ ಹಾಗೂ ಪ್ರೋತ್ಸಾಹ ಧನವನ್ನು ವಿದ್ಯಾರ್ಥಿನಿಯರು ಸುಲಭವಾಗಿ ಪಡೆಯಲು ಕಾಲೇಜು ಸೇತುವೆಯಂತೆ ತಮ್ಮೊಂದಿಗೆ ಇರುತ್ತದೆ. ಕಾಲೇಜಿನ ಪ್ರಾಧ್ಯಾಪಕರು ಬೋಧನೆ ಹಾಗೂ ಸಂಶೋಧನೆಯಲ್ಲಿ ನುರಿತವಾಗಿದ್ದು ವಿದ್ಯಾರ್ಥಿನಿಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಕಟಿಬದ್ಧರಾಗಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಮಾನ್ಯತೆ, ಗೌರವ ಪಡೆದಿರುವ ನಮ್ಮ ಅಧ್ಯಾಪಕರು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸದಾ ವಿದ್ಯಾರ್ಥಿನಿಯರೊಂದಿಗೆ ಇರುತ್ತಾರೆ. ಕಾಲೇಜಿನ ಆಡಳಿತ ಸಿಬ್ಬಂದಿ ವಿದ್ಯಾರ್ಥಿನಿಯರ ದೈನಂದಿನ ಸೌಕರ್ಯಗಳನ್ನು ಸುಲಲಿತವಾಗಿ ಪಡೆಯಲು ಸಹಕರಿಸುವರು. ನಮ್ಮ ವಿದ್ಯಾರ್ಥಿನಿಲಯ ಕೂಡ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ನೀಡುತ್ತಿದೆ. ಕಾಲೇಜಿನ ಗ್ರಂಥಾಲಯ ಸುಮಾರು ಒಂದು ಲಕ್ಷದಷ್ಟು ಪುಸ್ತಕಗಳನ್ನು ಹೊಂದಿದ್ದು, ವಿದ್ಯಾರ್ಥಿನಿಯರ ಓದು, ಪರಾಮರ್ಶೆಗೆ ಅವಕಾಶ ಮಾಡಿಕೊಟ್ಟಿದೆ. ಸುಸಜ್ಜಿತ ವಾಚನಾಲಯ, ದಿನಪತ್ರಿಕೆ, ಮ್ಯಾಗಝೀನ್‍ಗಳು ಹಾಗೂ ಶೈಕ್ಷಣಿಕ ಜರ್ನಲ್‍ಗಳನ್ನು ಹೊಂದಿದೆ. ವಿದ್ಯಾರ್ಥಿನಿಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಲೇಜು, ಸಾಂಸ್ಕøತಿಕ ಹಾಗೂ ಕ್ರೀಡಾ ವೇದಿಕೆಗಳನ್ನು ಒದಗಿಸಿದೆ. ಅಲ್ಲದೆ, ವಿದ್ಯಾರ್ಥಿನಿಯರು ಸಮುದಾಯದೆಡೆಗೆ ತಮ್ಮ ನಡೆಯನ್ನು ಗುರುತಿಸಿಕೊಳ್ಳಲು ಎನ್.ಸಿ.ಸಿ., ಎನ್.ಎಸ್.ಎಸ್. ಸ್ಕೌಟ್ಸ್ & ಗೈಡ್, ರೆಡ್‍ಕ್ರಾಸ್‍ನಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಿದೆ. ಈ ಕಾಲೇಜಿನಲ್ಲಿ ನಿಮ್ಮ ಮುಂದಿನ ಭವಿಷ್ಯ ಹಸನಾಗಲೆಂದು ಹಾರೈಸುವೆ.

 ಡಾ . ಎಂ . ಚನ್ನಬಸವೇಗೌಡ ಎಂ.ಕಾಂ, ಎಂ.ಬಿ.ಎ, ಪಿ. ಎಚ್.ಡಿ .

ಡಾ . ಎಂ . ಚನ್ನಬಸವೇಗೌಡ ,
            ಎಂ.ಕಾಂ, ಎಂ.ಬಿ.ಎ, ಪಿ. ಎಚ್.ಡಿ
                            Principal

EVENTS

ACADEMICS

Under Graduation Programs
History, Economics, Political Science   (H.E.P)
History, Economics, Sociology  (H.E.S)
History, Economics, Geography  (H.E.G)
History, Economics, Kannada  (H.E.K)
History, Sociology, Kannada (H.S.K)
History, Economics, Kannada  (H.E.K)
History, Economics, Psychology  (H.E.Psy)
  See many more...
Post Graduation Programs
History
Economics
English
Sociology
Public Administration
Political Science
See many more...
Certificate Courses
1. Computer Soft Skills
2. Marketing Management
3. Insurance Management